ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1951 – ಇದು ಮೈಸೂರು ರಾಜ್ಯದ ಸ್ವತಂತ್ರಾ ನಂತರದ ಮೊದಲನೆಯ ವಿಧಾನಸಭೆಗೆ ಚುನಾವಣೆ. ಈ ಚುನಾವಣೆಗಳು ಹಳೆಯ ಮೈಸೂರು ಪ್ರಾಂತಗಳಿಗೆ ಅನ್ವಯಿಸುತ್ತವೆ. ಹೀಗಾಗಿ ಒಟ್ಟು ಸ್ಥಾನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತದೆ. ಇದನ್ನು ಮೊಟಕುಗೊಳಿಸಿದ ಕರ್ನಾಟಕದ ಭಾಗದ ಚುನಾವಣೆ ಎಂದು ಹೇಳಬಹುದು ಏಕೆಂದರೆ ಇದು ಕರ್ನಾಟಕದ ಏಕೀಕರಣಕ್ಕೂ ಮುಂಚಿನ ಚುನಾವಣೆ. ಒಟ್ಟು ಸ್ಥಾನಗಳು 99. ಚುನಾವಣೆಯಲ್ಲಿ 74 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಅತಿ ದೊಡ್ಡ ವಿರೋಧ ಪಕ್ಷವಾದ ಕಿಸಾನ್ ಮಜ್ದೂರ್ ಪ್ರಜಾ ಪಕ್ಷವು 8 ಸ್ಥಾನಗಳನ್ನು ಗಳಿಸಿದೆ. ಚುನಾವಣೆಯ ನಂತರ ಕೆ. ಚೆಂಗಲರಾಯ ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ. ಈ ವಿಧಾನಸಭೆಯು 18 ಜೂನ್ 1952ರಿಂದ 31 ಮಾರ್ಚ್ 1957ರ ವರೆಗೂ ಆಸ್ತಿತ್ವದಲ್ಲಿತ್ತು. ಇದರ ಅವಧಿಯಲ್ಲಿಯೇ ಕರ್ನಾಟಕದ ಏಕೀಕರಣವಾಯಿತು (ಮೈಸೂರು ರಾಜ್ಯವಾಗಿ). ಈ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಎಸ್. ನಿಜಲಿಂಗಪ್ಪ ಸಹ ಮುಖ್ಯಮಂತ್ರಿಗಳಾದರು. == ಪಲಿತಾಂಶ == == ಆಧಾರಗಳು == 2016-12-03 2016-12-03 == ಉಲ್ಲೇಖ ==